ಡಿ ಕೆ ೨೯ಕ್ಕೆ ಪ್ರಾರಂಭ
Posted date: 19 Thu, Jun 2014 – 02:35:43 PM

ಈ ಹಿಂದೆ ತಿಳಿಸಿದ ಹಾಗೆ ‘ಪ್ರೇಮ್ ಡ್ರೀಮ್ಸ್’ ಅವರ ‘ಡಿ ಕೆ’ ಚಿತ್ರವು ಜೂನ್ ೨೨ರಂದು ಮುಹೂರ್ತ ಸಮಾರಂಭ ನಡೆಸಬೇಕಿತ್ತು, ಆದರೆ ಇದೆ ತಿಂಗಳ ೨೦ರಿಂದ ಡಾ ರಾಜ್‌ಕುಮಾರ್ ಅವರ ಅಭಿನಯದ ನಾನೊಬ್ಬ ಕಳ್ಳ ಚಿತ್ರ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಅದೇ ಚಿತ್ರಮಂದಿರದಲ್ಲಿ ಯೋಜಿಸಲಾಗಿದ್ದ ಸಮಾರಂಭವನ್ನು ಬರುವ ಭಾನುವಾರ ಅಂದರೆ ೨೯ನೇ ತಾರೀಖಿನಂದು ನಡೆಸಲು ತಂಡ ನಿರ್ಧರಿಸಿದೆ.

೨೯ರಂದು ನಗರದ ಕಪಾಲಿ ಚಿತ್ರಮಂದಿರದಲ್ಲಿ ಮುಹೂರ್ತ ಜೊತೆಗೆ ಚಿತ್ರದ ಟ್ರೈಲರ್ ಸಹ ಬಿಡುಗಡೆ ಆಗಿ ಕರ್ನಾಟಕದಲ್ಲಿ ೩೦೦ ಚಿತ್ರಮಂದಿರದಲ್ಲಿ ಅಂದಿನಿಂದ ಪ್ರದರ್ಶಿಸಲಾಗುವುದು ಎಂದು ನಿರ್ಮಾಪಕಿ ರಕ್ಷಿತಾ ಪ್ರೇಮ್ ಅವರು ತಿಳಿಸಿದ್ದಾರೆ.

ಡಿ ಕೆ ಚಿತ್ರ ಕಳೆದ ವಾರ ಆಕಾಶ್ ಸ್ಟುಡಿಯೋದಲ್ಲಿ ಪೋಸ್ಟರ್ ಬಿಡುಗಡೆ ಹಾಗೂ ಹಾಡುಗಳ ಧ್ವನಿ ಮುದ್ರಣ ಕಾರ್ಯಕ್ಕೆ ಚಾಲನೆ ಪಡೆದುಕೊಂಡಿದೆ. ಈ ಚಿತ್ರದಿಂದ ನಿರ್ದೇಶಕ ಉದಯ ಪ್ರಕಾಶ್ ಅವರು ವಿಜಯ್ ಹಂಪಲಿ ಎಂದು ನಾಮಕರಣ ಮಾಡಿಕೊಂಡಿದ್ದಾರೆ.

ಅರ್ಜುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯ ಸುದರ್ಶನ್ ಅವರು  ಮೂರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದು ಒಂದು ಹಾಡನ್ನು ಪ್ರೇಮ್ ಬರೆದಿದ್ದಾರೆ.

ಆನಂದ್, ಮಾಸ್ ಮಾಧ, ಶ್ರೀನಿವಾಸ್ ಪಿ ಬಾಬು, ನಾಗೇಶ್, ಪ್ರಭು, ಭದ್ರಿ, ಡ್ಯಾನಿ, ಬಾಬು, ಸೋಮು, ಮಂಜು, ರವಿ ತಾಂತ್ರಿಕ ವರ್ಗದಲ್ಲಿ ಹಾಗೂ ಸಹಾಯಕರಾಗಿ ಜೊತೆಯಾಗಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed